ಅಚ್ಚುಮೊಳೆ ಎರಕಹೊಯ್ಯುವ ಯಂತ್ರಗಳು
	
ಪೂರ್ವಕಾಲದಲ್ಲಿ ಬಿಡಿ ಅಚ್ಚುಮೊಳೆಗಳನ್ನು ತಯಾರಿಸಲು ಕೈಯಿಂದಲೇ ಆಯಾ ಮಾತೃಕೆಯನ್ನು ಒಂದು ಗೊತ್ತಾದ ಅಳತೆಯ ಆಕಾರದ ಮೂಸೆಗೆ (ಮೈಲ್ಡ್) ಜೋಡಿಸಿ ಕಾದ ಸೀಸವನ್ನು ಹೊಯ್ದು ದಿನಕ್ಕೆ 10-12 ಪೌಂಡುಗಳಷ್ಟನ್ನು ತಯಾರಿಸುತ್ತಿದ್ದರು. ಈಗ ಅನೇಕ ಸಂಸ್ಥೆಯವರು ಪ್ರತಿ ಅಚ್ಚುಮೊಳೆಗೆ ವಿಶೇಷ ರೀತಿಯ ಮಾತೃಕೆಯನ್ನು ತಯಾರಿಸಿ ತಮ್ಮ ಸಂಸ್ಥೆಯಲ್ಲಿ ನಿರ್ಮಿಸಲ್ಪಟ್ಟ ಎರಕ ಹೊಯ್ಯುವ ಯಂತ್ರದಲ್ಲಿ ಗಂಟೆಗೆ 8-10 ಪೌಂಡುಗಳಷ್ಟು ತಯಾರಿಸುತ್ತಾರೆ. ಥಾಮ್‍ಸನ್ ಕಂಪನಿ, ಮಾನೋಟೈಪ್ ಸಂಸ್ಥೆಯವರ ಸೂಪರ್ ಕ್ಯಾಸ್ಟರ್ ಯಂತ್ರದಲ್ಲಿ ಟೈಪುಗಳಲ್ಲದೆ, ಅಚ್ಚುಮೊಳೆ ಜೋಡಣೆಗೆ (ಕಂಪೋಸಿಂಗ್) ಬೇಕಾಗುವ ಅನೇಕ ಸಾಮಗ್ರಿಗಳನ್ನೂ ತಯಾರಿಸಲು ಸಾಧ್ಯ.
(ಎಂ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ